ವಾಣಿ ಹರಿಕೃಷ್ಣ ರವರು ಭಾರತೀಯ ಚಲನಚಿತ್ರ ಹಿನ್ನೆಲೆ ಗಾಯಕಿ ಮತ್ತು ಸಂಗೀತ ನಿರ್ದೇಶಕಿಯಾಗಿದ್ದು, ದಕ್ಷಿಣ ಭಾರತೀಯ ಚಲನಚಿತ್ರಗಳಲ್ಲಿ ಪ್ರಮುಖವಾಗಿ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.ಅವರು ಚಿತ್ರ ಹಿನ್ನೆಲೆ ಗಾಯನಕ್ಕೆ ಪ್ರವೇಶಿಸುವ ಮೊದಲು ಹಲವಾರು ಭಕ್ತಿ ಗೀತೆಗಳನ್ನು ರಚಿಸಿ, ಬರೆದು, ಹಾಡಿದ್ದಾರೆ.'ಇಂತಿ ನಿನ್ನ ಪ್ರೀತಿಯ' ಚಿತ್ರದ "ಮಧುವನ ಕರೆದರೆ" ಗೀತೆಗಾಗಿ ಅವರಿಗೆ ಕರ್ನಾಟಕ ರಾಜ್ಯ ಪ್ರಶಸ್ತಿ ದೊರಕಿದೆ.೨೦೧೩ ರಲ್ಲಿ 'ಲೂಸ್ಗಳು' ಚಿತ್ರದಲ್ಲಿ ಮೊದಲ ಬಾರಿಗೆ ಸಂಗೀತ ಸಂಯೋಜಕಿಯಾಗಿ ಕೆಲಸ ಮಾಡಿದರು.‌ == ಕುಟುಂಬ == ವಾಣಿಯವರು ಸಂಗೀತಗಾರರ ಕುಟುಂಬದಲ್ಲಿ ಜನಿಸಿದವರು.ಅವರ ಅಜ್ಜ, ಜಿ.ಕೆ.ವೆಂಕಟೇಶ್, ಕನ್ನಡ ಚಿತ್ರರಂಗದಲ್ಲಿ ಸಂಗೀತ ಸಂಯೋಜಕರಾಗಿದ್ದರು.ವಾಣಿಯವರು ಸಂಗೀತ ನಿರ್ದೇಶಕರಾದ ವಿ‌.ಹರಿಕೃಷ್ಣ ಅವರನ್ನು ಮದುವೆಯಾಗಿದ್ದಾರೆ ಹಾಗೂ ಅವರಿಬ್ಬರಿಗೆ ಆದಿತ್ಯ ಎಂಬ ಮಗನಿದ್ದಾನೆ. == ಚಲನಚಿತ್ರಗಳ ಪಟ್ಟಿ == === ಸಂಗೀತ ನಿರ್ದೇಶಕಿಯಾಗಿ === === ಗಾಯಕಿಯಾಗಿ === == ಪ್ರಶಸ್ತಿಗಳು == 'ಇಂತಿ ನಿನ್ನ ಪ್ರೀತಿಯ' ಚಿತ್ರದ "ಮಧುವನ ಕರೆದರೆ" ಹಾಡಿಗೆ ಕರ್ನಾಟಕ ರಾಜ್ಯ ಚಲನಚಿತ್ರ ಪ್ರಶಸ್ತಿ. 'ಸಾರಥಿ' ಚಿತ್ರದ "ಹಾಗೋ ಹೀಗೋ" ಹಾಡಿಗೆ ಸುವರ್ಣ ಚಲನಚಿತ್ರ ಪ್ರಶಸ್ತಿ(೨೦೧೧). 'ಅದ್ದೂರಿ' ಚಿತ್ರದ "ಮುಸ್ಸಂಜೆ ವೇಳೇಲಿ" ಹಾಡಿಗೆ ಸುವರ್ಣ ಚಲನಚಿತ್ರ ಪ್ರಶಸ್ತಿ(೨೦೧೨), ಮಿರ್ಚಿ ಮ್ಯೂಸಿಕ್ ಪ್ರಶಸ್ತಿ (ಸೌತ್-೨೦೧೨), ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಪ್ರಶಸ್ತಿ. 'ಕಡ್ಡಿಪುಡಿ' ಚಿತ್ರದ "ಬೇರೆ ಯಾರೊ" ಹಾಡಿಗೆ ಸೌತ್ ಇಂಡಿಯನ್ ಇಂಟರ್ನ್ಯಾಷನಲ್ ಮೂವಿ ಪ್ರಶಸ್ತಿ. ‌‌‌‌‌‌‌‌ == ಉಲ್ಲೇಖಗಳು ==